ಮಾನಸಿಕ ಭೂತ
ಮೊದಲ ಪೋಸ್ಟ್ ನೋಡಿದ್ರ..
ಬನ್ನಿ....
ಇದೇನಪ್ಪಾ..ಇದು ..ಹೊಸ ಪದ ಕೇಳ್ತಾ ಇದ್ದಂಗ್ ಐತಲ್ಲಾ ಅಂತ ಅನಿಸ್ತಿದಿಯಾ ..`ಆರೋಗ್ಯ ಕಲೆ ' ಈಗ ಹೊಸ ಪದವೇ ಆಗಿರಬಹುದು ಮತ್ತು ಈ ತಾತ್ವಿಕ ಅಂಶಗಳ ವಿಧಾನವು ಸಹ ಹೊಸತು ಅನ್ನಿಸಬಹುದು,ಆದರೆ ಈ ಆಧುನಿಕ ಜೀವನದ ಅವುಷಧದ ಉಪಚಾರಕ್ಕಿಂತಲೂ ಮೊದಲು ಕಳೆದ ಸಾವಿರಾರು ವರ್ಷಗಳ ಹಿಂದಿನ ಜನ ಜೀವನದಲ್ಲಿ ಒಬ್ಬರಿಂದ ಒಬ್ಬರಿಗೆ ಅನುಕರಣೆ ರೂಪದಲ್ಲಿ ತಮ್ಮ ಬುದ್ಧಿವಂತಿಕೆಯಿಂದ ತಮ್ಮ ತಮ್ಮ ಯೋಗ ಕ್ಷೇಮವನ್ನು ಕಾಪಾಡಿಕೊಂಡು,ಮದ್ದು ಉಪಚಾರವು ತೀರ ವಿರಳವಾಗಿರುತ್ತಿದ್ದವು ಎಂಬ ಸಂಗತಿ ಇತಿಹಾಸ ಪ್ರಜ್ಞರ ಮೂಲಕ ಅರಿತ ಎಲ್ಲ ಸಾಮಾನ್ಯ ವ್ಯಕ್ತಿಗಳಿಗೂ ತಿಳಿದ ವಿಷಯ,ಈ ಬಗ್ಗೆ ಭಿನ್ನ ಅಭಿಪ್ರಾಯದ ಕಡೆ ವಾಲುವುದು ಸೋಜಿಗವೆಂದು ನನಗೆ ಅನಿಸುತ್ತದೆ. ಆದರೆ ಆ ಹಿಂದಿನ ಯೋಗಕ್ಷೇಮ ವಿಧಾನ ಈಗಲೂ ಉಳಿದುಕೊಂಡು ಬಂದಿದ್ದರೆ,ಈಗಿನ ಆಧುನಿಕ ಅವುಷಧ ಉಪಚಾರಕ್ಕೆ ಈಗಿನಂತ ಬೆಲೆ ತೆತ್ತಬೇಕಾಗಿತ್ತೆ .
ಮತ್ತೆ ..ಬೇಡಿದಷ್ಟು ಬೆಲೆ ತೆತ್ತಲೇಬೇಕು,ಯಾಕೆ ಹೇಳಿ ?
ಹಣ ಖರ್ಚು ಆಗದೆ ಹಾಗೆ ಖಾಯಿಲೆ ವಾಸಿ ಆಗ್ತದಾ?
ಹೋಗ್ಲಿ,ವಾಸಿ ಆಗ್ಲಪ್ಪ ಅಂತ ಧ್ಯಾನ ಮಾಡೋ ತರ ಹೇಳ್ಕೋತಾ ಕೂತರೆ,ವಾಸಿ ಆಗುತ್ತಾ?
ಹೋಗ್ಲಿ ಬಿಡ್ರಿ, ಬರೋ ದುಡ್ಡು ಎಂಗ್ ಖರ್ಚ್ ಆಗ್ಬೇಕು ..
ಇಲ್ಲ..ನಮ್ಮ ಖಾಯಿಲೆ ನಾವೇ ವಾಸಿ ಮಾಡ್ಕೊಳ್ಳೋಕೆ ನಾವೇನಾದ್ರು ವೈದ್ಯರೇ.. ಪಂಡಿತರೆ..
ಇಲ್ಲ ಇಲ್ಲ ಇರೋದ್ ಒಂದೇ ದಾರಿ,ಯಾರೋ ಮಾಟ ಮಾಡ್ಸೀದಾರೆ....ಅಲ್ಲೇ....
ಈ ರೀತಿ ನಂಬಿಕೆ ಅಪನಂಬಿಕೆಯ ನಡೆವಳಿಕೆಗಳು ಸರ್ವೇ ಸಾಮಾನ್ಯ,ಯಾಕೆ ಹೇಳಿ?
ಇದರ ಹಿಂದೆ ಪಂಚ ಜ್ಞಾನ ಇಂದ್ರಿಯಗಳನ್ನು ಅಶುದ್ಧತೆಗೊಳಿಸಲು ಮಾನಸಿಕವಾಗಿ ಆಕರ್ಷಿತವಾಗುವಂತ ದುರಾಸೆ ಎಂಬ ಮನಸಿನ ಭೂತ ಅಡಗಿರುತ್ತದೆ-
ಹಣದ ಆಸೆ, ನಾಲಿಗೆ ರುಚಿಯ ಆಸೆ, ಹೊರಗಿನ ಕಂಡ ಕಂಡ ತಿನಿಸುಗಳನ್ನು ಸೇವಿಸುವುದು,
ಜಾಹಿರಾತುಗಳಿಗೆ ಆಕರ್ಷಣೀಯರಾಗಿ ವಿವಿಧ ರೀತಿಯ ಉತ್ಪಾದಿತ ಹೊಸ ತಿನಿಸುಗಳನ್ನು ಮಿತಿಮೀರಿ ಸೇವಿಸುವುದು,
ಕೆಲಸದ ಒತ್ತಡ,ಖಾಯಿಲೆ..ಇದೇನು ಬರುತ್ತೆ,ಹೋಗುತ್ತೆ..ಎಂಬ ನಿರ್ಲಕ್ಷತನದ ಅಭ್ಯಾಸ,
ಆರೋಗ್ಯದ ಕಡೆ ಗಮನ ಹರಿಸದಿರುವುದು, ಆರೋಗ್ಯ ಸುಧಾರಿಸಿಕೊಳ್ಳುವ ಮತ್ತು ವೈಜ್ಞಾನಿಕ ಮನೋಭಾವನೆಯ ಕೊರತೆ,
ಇವು ಮನಸ್ಸು ಮನಬಂದಂತೆ ನಡೆದುಕೊಳ್ಳುವ ರೀತಿಯೇ ಅನಾರೋಗ್ಯಕ್ಕೆ ಕಾರಣವಾಗದಿರಲಾರವೇ?
ಇಷ್ಟಕ್ಕೆ ಮಾತ್ರವೇ ಆರೋಗ್ಯ ಅನಾರೋಗ್ಯಕ್ಕೆ ಈಡಾಗುವುದು ಎಂದು ಭಾವಿಸಬೇಡಿ,
ಮನೆಯಲ್ಲಿ ತಯಾರಿಸಿದ ಶುದ್ಧ ಆಹಾರದಿಂದಲೂ ದೊಡ್ಡ ಖಾಯಿಲೆಗಳಿಗೆ ಈಡಾಗುವ ಸಾಧ್ಯತೆಗಳಿವೆ, ಅದು ಹೇಗೆ?
ಅದು ಹೀಗೆಯೇ-ವೈಜ್ಞಾನಿಕ ಸಂಶೋಧನೆಯ ಪ್ರಕಾರ ಒಬ್ಬ ವ್ಯಕ್ತಿಯ ಆರೋಗ್ಯ ಸುಸ್ಥಿತಿಯಲ್ಲಿರಬೇಕೆಂದರೆ ಶುದ್ಧರಕ್ತವಿರಬೇಕು ಮತ್ತು ರಕ್ತದ ಒತ್ತಡವೂ ಸಹ ಹೆಚ್ಚು, ಕಡಿಮೆಯಾಗದ ರೀತಿಯಲ್ಲಿ ಸಾಧಾರಣ ಸ್ಥಿತಿಯಲ್ಲಿರಬೇಕು, ಅಂದರೆ ಈ ಸುಸ್ಥಿತಿಯಲ್ಲಿ ಅತ್ಯಂತ ಕನಿಷ್ಠ ಮಟ್ಟದಲ್ಲೂ ಲೋಪ ದೋಷ ಉಂಟಾದರೂ,ಶುದ್ಧರಕ್ತ ಮತ್ತು ರಕ್ತದ ಒತ್ತಡದಲ್ಲಿ ಏರುಪೇರು (ಬದಲಾವಣೆ) ಆಗುವುದು ಹಾಗೆಯೇ ಅನಾರೋಗ್ಯಕ್ಕೆ (ದೊಡ್ಡ ಖಾಯಿಲೆಗೂ) ಹಾದಿ ಸುಗಮವಾಗಬಲ್ಲದು ಎಂಬ ಅಂಶವನ್ನು ಸಾಮಾನ್ಯ ಜ್ಞಾನ ಮಟ್ಟದಲ್ಲೂ ಆಲೋಚನೆಯ ಮೂಲಕ ಅರಿತುಕೊಳ್ಳಬಹುದಾಗಿದೆ ಮತ್ತು ಉತ್ತಮ ಆರೋಗ್ಯ ಸುಧಾರಣೆಗೆ ಈ ಅಂಶವೇ ಕೇಂದ್ರ ಬಿಂದುವಾಗಿದೆ ಎಂಬುದನ್ನು ಸದಾ ಮಾನಸಿಕವಾಗಿ ಮನದಟ್ಟು ಆಗಿರಬೇಕಾದ ವಿಷಯವೂ ಆಗಿದೆ.
`ನನ್ನ ದೇಹ,ನನ್ನ ಹೊಟ್ಟೆ,ನನ್ನ ದುಡ್ಡು,ಬೇಕಾದ್ದನ್ನ ತಿನ್ನೋದು ನನ್ನಿಷ್ಟ...
ಆದರೆ, ನಂದೇ ದೇಹ,ನಂದೇ ಹೊಟ್ಟೆ,ನಂದೇ ದುಡ್ಡು,ಬೇಕಾಬಿಟ್ಟಿ ಆರೋಗ್ಯ ಕೆಟ್ರೆ... ಎಷ್ಟು ಕಷ್ಟ...ಯಾರಿಗೆ ಕಷ್ಟ...
ಹಿತ ಮಿತ ಸೇವನೆಗೆ ಒಂದು ಶಿಸ್ತು ಇರಲಿ, ಈ ಶಿಸ್ತಿನ ಮುಂಜಾಗ್ರತಾ ಅರಿವಿಗೆ ಮಾತ್ರ ವೈಧ್ಯರ ಸಲಹೆ ಇರಲಿ...ಅಲ್ಲವೇ'
ಅದಕ್ಕಾಗಿಯೇ`ಆರೋಗ್ಯ ಕಲೆ' ಎಂಬ ಸುರಕ್ಷಿತ ಪಾಲನೆಯನ್ನು ಸುರಕ್ಷಿತವಾಗಿಯೇ ನಡೆಸಿಕೊಂಡು ಹೋದಲ್ಲಿ ಉತ್ತಮ ಅರೋಗ್ಯ ಸುಧಾರಣೆಯ ಹಾದಿಯಲ್ಲೇ ಕ್ಷೇಮವಾಗೆ ನಡೆಯಬಹುದು ಎಂಬುದನ್ನು ನೀವೇ ಅರಿತುಕೊಳ್ಳಬಹುದಾಗಿದೆ.
ಮುಂದಿನ ಪೋಸ್ಟ್ ಗೆ ಹೋಗಿ...

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ