ಆರೋಗ್ಯ ಕಲೆ
ವ್ಯಕ್ತಿ ತನ್ನ ಜೀವನದ ಎಲ್ಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸುಸಜ್ಜಿತ ದೈಹಿಕ ವ್ಯವಸ್ಥೆಯೊಂದಿಗೆ ತನ್ನ ಬೆಳೆವಣಿಗೆಯ ಸಹಾಯದಿಂದ ತಾನೇ ಸ್ವಯಂಚಾಲಿತ ಸಾಮರ್ಥ್ಯವನ್ನು ಪಡೆದಿರುತ್ತಾನೆ. ಜ್ಞಾನ ಸಂಪಾದನೆಗೆ ಮತ್ತು ಸುಪ್ತ ಜ್ಞಾನವನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಪಡೆಯಲು ಪಂಚ ಜ್ಞಾನ ಇಂದ್ರಿಯಗಳನ್ನು ಹೊಂದಿದ್ದಾನೆ. ಈ ಎಲ್ಲ ದೈಹಿಕ ವ್ಯವಸ್ಥೆಯು ಮಾನವನಿಗೆ ಅಲ್ಲದೆ ಪ್ರತಿ ಜೀವಿತ ವಸ್ತುಗಳಿಗೂ ಪ್ರಕೃತಿಯಿಂದಲೇ ಸೃಷ್ಥಿಯಾಗಿರುವುದಲ್ಲದೆ,ಈ ಸೃಷ್ಥಿಯಲ್ಲಿಯೂ ಸಹ ಅವಶ್ಯ ಆಕಾರ,ಅಳತೆ,ಪ್ರಮಾಣಗಳೊಂದಿಗೆ ವೈಜ್ಞಾನಿಕ,ತಂತ್ರಜ್ಞಾನ ಮತ್ತು ಚಿಂತನೆ (ಕಲಾತ್ಮಕ) ಯ ಅಂಶಗಳ ಸಂಯೋಜನೆಯ ಕ್ರಿಯಾ ವಿಧಾನದ ಮೂಲಕವೇ ಪುನಃ ಪರಿವರ್ತಿತ ಬೆಳವಣಿಗೆಯ ಕೊಡುಗೆಯಾಗಿದೆ ಎಂದರೆ ತಪ್ಪಾಗಲಾರದು.ಇಷ್ಟೇ ಅಲ್ಲದೆ ಗಾಳಿ,ಬೆಳಕು,ನೀರು ಮತ್ತು ಪ್ರತಿ ಎಲ್ಲ ಆಯಾ ಜೀವಿತ ವಸ್ತುಗಳಿಗೆ ತಕ್ಕಂತೆ ಆಹಾರ ಸಾಮಗ್ರಿಗಳು ಮತ್ತು ಈ ಆಹಾರವನ್ನು ಅತಿಯಾಗಿ ಸೇವಿಸಿದಲ್ಲಿ ರೋಧಕ ಮತ್ತು ವ್ಯತಿರಿಕ್ತ ನಿರೋಧಕ ಉಂಟು ಮಾಡುವಂತ ಜೀವನಾಂಶಗಳಿರುವ ಈ ಎಲ್ಲ ಬೆಳೆಗಳನ್ನು ಬೆಳೆಯುವ ಮೂಲಕ ಪ್ರಕೃತಿಯೇ ನೀಡುತ್ತಿದ್ದರು ಈ ಸೃಷ್ಥಿಯಲ್ಲಿ ಯಾವುದಾದರೂ ಅಶುದ್ಧತೆ,ಅನಾವಶ್ಯಕ,ಅಸಮರ್ಪಕ ಲೋಪ ದೋಷವೆನಾದರೂ ಇವೆಯೇ? ಆದರೆ ಲೋಪ ದೋಷಗಳಿರುವುದು ಮಾನವನ ನಡೆವಳಿಕೆಗಳಲ್ಲಿ,ಅತಿಯಾದ ಆಸೆಗಳಲ್ಲಿ.ಆಹಾರಗಳ ಬಗ್ಗೆ ವೈಜ್ಞಾನಿಕ ಮನೋಬಾವನೆ, ಆರೋಗ್ಯಕ್ಕಾಗಿ ಆಹಾರ ಬಳಕೆಯ ಬಗ್ಗೆ ತಂತ್ರಜ್ಞಾನ,ಆಹಾರ ಬಳಕೆಯ ನಂತರ ಸೇವಿಸಿದ ಆಹಾರದಿಂದಾಗುವ ಪರಿಣಾಮ ಮತ್ತು ಪಚನ ಕ್ರಿಯೆಯ ಮಾರ್ಗದ ಅರಿವಿನ ಕೊರತೆ. ಅಂದು ಅವುಷಧಿಯ ಪರಿಚಯವೇ ಅಪರೂಪ,ಇಂದು ಅವುಷಧಿಯೇ ಆಹಾರದ ರೂಪ. ಅದಕ್ಕೆಂದೇ ಇಂದು ವ್ಯಕ್ತಿ ತನ್ನ ಸಂಪೂರ್ಣ ಆರೋಗ್ಯದ ಉಸ್ತುವಾರಿಯನ್ನು ಅವುಷದೋಪಚಾರಕ್ಕೆ ಕೊಟ್ಟು ಪರಾವಲಂಬಿಯಾಗಿದ್ದಾನೆ.
ತಮ್ಮ ಜ್ಞಾನ ಇಂದ್ರಿಯಗಳು ತಮ್ಮ ಹಿಡಿತದಲ್ಲಿದ್ದು ಶುದ್ಧ,ಸ್ವಚ್ಛ ಸುಸ್ಥಿತಿಯಲ್ಲಿದ್ದು ಯಾವ ಲೋಪದೋಷಗಳಿಲ್ಲದೆ ಸೂಕ್ಷ್ಮವಾಗಿ ತಮ್ಮ ತಮ್ಮ ಕಾರ್ಯವನ್ನು ತಾವೇ ನಿರ್ವಹಿಸಿದರೆ ಮಾತ್ರ ವ್ಯಕ್ತಿಯು ದೈಹಿಕವಾಗಿ ಆರೋಗ್ಯವಂತನಾಗಿಯು ಹಾಗು ಮಾನಸಿಕವಾಗಿ ಕಲಾವಂತನಾಗಿಯು ಕಾಣಲು ಸಾಧ್ಯ.
ಸ್ವಯಂಚಾಲಿತ ದೈಹಿಕ ವ್ಯವಸ್ಥೆಯಲ್ಲಿ ಜ್ಞಾನ ಇಂದ್ರಿಯಗಳು ಹಾಗು ಮನಸ್ಸು ಎರಡು ಪರಸ್ಪರ ಪೂರಕ ವರ್ತನೆಗೆ ಕಾರಣಗಳಾಗಿವೆ. ಮನಸ್ಸಿನ ಕ್ರಿಯೆಗೆ ಜ್ಞಾನ ಇಂದ್ರಿಯಗಳ ಸ್ವಚ್ಚತೆ,ಜ್ಞಾನ ಇಂದ್ರಿಯಗಳ ಸ್ವಚ್ಚತೆಗೆ ಮನಸ್ಸಿನ ಜ್ಞಾನದ ಪ್ರಕ್ರಿಯೆ. ಈ ವ್ಯವಸ್ಥಿತ ರೂಪುರೇಷೆಗಳು ನಿತ್ಯ ಕ್ರಮಬದ್ಧವಾಗಿ ನಡೆಸುವ ಕಾರ್ಯ ಸ್ವತಃ ಮನಸ್ಥೈರ್ಯ,ಸಾಮರ್ಥ್ಯ,ಚಿಂತನೆಗಳ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಿಂದಲೇಭದ್ರ ಬುನಾದಿಯಾಗಿ ರೂಪಿತವಾಗಬೇಕು. ಕಲಾತ್ಮಕವಾದ ಒಂದು ಸ್ವ ಜ್ಞಾನ ಮಾಪನದಂತೆ ಸೃಜನಶೀಲತೆಯಾಗಿ ಬೆಳೆಯಬೇಕು. ಆಗ ದೇಹಸ್ಥಿತಿಯಲ್ಲಾಗುವ ಅನಾರೋಗ್ಯದ ಲಕ್ಷಣಗಳ ಸೂಚನೆಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಮೂಲಕ ಆಗುವ ಅನುಭವ,ಮತ್ತು ಈ ಸಾಮರ್ಥ್ಯವು ಬೇರೆ ಯಾವುದೇ ಪರೀಕ್ಷಾ ಮಾಪನದಿಂದ ಪರೋಕ್ಷವಾಗಿ ದೊರೆಯುವ ಮಾಹಿತಿಗಳಿಗಿಂತ ಸ್ಪಷ್ಟ ಪರಿಪೂರ್ಣ ಮಾಹಿತಿಗಳು ಪ್ರತ್ಯಕ್ಷ ಮಾಹಿತಿಗಳಂತೆ ಆಂತರಿಕವಾಗಿ ತಮಗೆ ಗೋಚರಿಸುವುವು. ಈ ಮಾಹಿತಿ ಜ್ಞಾನಕ್ಕಾಗಿಯೇ ಆರೋಗ್ಯ ಸುಧಾರಣೆಯ ಆರು ಯೋಗ್ಯ ಪರಿಕಲ್ಪನೆಗಳನ್ನು ಪಂಚ ಜ್ಞಾನ ಇಂದ್ರಿಯಗಳ ಸಹಾಯದಿಂದ ಅರಿತು ಪಾಲಿಸುವ ಕ್ರಿಯೆಯೇ `ಆರೋಗ್ಯ ಕಲೆ '.
ಆರೋಗ್ಯ ಕಲೆ:
ಕ್ರಿಯಾ ವಿಧಾನದ ತಾತ್ವಿಕ ಅಂಶಗಳು -
ವೈಜ್ಞಾನಿಕ ಮನೋಬಾವನೆ :
1) ಸಮಯಾನುಸಾರ ದೇಹಸ್ಥಿತಿ,ನೈಸರ್ಗಿಕ ಗುಣಮಟ್ಟದ ಅರಿವು
2) ಸಮರ್ಥ ಆಹಾರ ಪ್ರಜ್ಞೆ
ತಂತ್ರ ಜ್ಞಾನ:
1) ಸಮಯ ಪಾಲನೆ ಹಾಗು ಸುಚಿತ್ವ ಪಾಲನೆ
2) ಸಾಮಾನ್ಯ ಪಚನಕ್ರಿಯೆ ಮಾರ್ಗದ ಅರಿವು
ಚಿಂತನೆ: (ಕಲೆ)
1) ಸಮತೋಲನ ಆಹಾರ ಸೇವನೆ
2) ಸಮಯೋಚಿತ ವರ್ತನೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ